ತುಂಬಾ ದಿನಗಳಾದ ಮೇಲೆ kanndadalli ಬರೀತಾ ಇದ್ದೇನೆ. ಸಂತೋಷ ಆಗ್ತಾ ಇದೆ. ಇದೆಲ್ಲ ಸಾಧ್ಯ ಆಗ್ತಾ ಇರೋದು ಗಣಕ ಯಂತ್ರ ಮತ್ತು ಅದನ್ನು ಹೊಸ ಹೊಸ ರೀತಿಯಲ್ಲಿ ಉಪಯೋಗಿಸೋದನ್ನ ಸಾಧ್ಯ ಮಾಡೋ ತಂತ್ರಜ್ನ್ಯರ ಕೃಪೆಯಿಂದ. ಸಂಕೀರ್ಣವಾದ ಶಬ್ದಗಳನ್ನ ಕೂಡ ತೊಂದರೆ ಇಲ್ಲದೆ ಕನ್ನದಲ್ಲಿ ತರ್ಜುಮೆ ಮಾಡೋ ಇದರ ಶಕ್ತಿಗೆ ನಾನು ಮರಳು ಆಗ್ತ ಇದ್ದೇನೆ.
ಮಹಿಳಾ ದಿವಸದಂದು ನನಗೆ ಈ ಹೊಸ ವಿಷಯ ಸಾಧ್ಯವದದ್ದು , ಮಾತೃ ಭಾಷೆಯಲ್ಲಿ ಬರೀತಾ ಇದ್ದದ್ದು ತುಂಬ ಖುಷಿ. ನಾನು ನನ್ನ ಜೀವನವನ್ನ ಇಲ್ಲಿಯವರೆಗೆ ರೂಪಿಸೋದ್ರಲ್ಲಿ ನನ್ನ ಜೀವನದಲ್ಲಿ ಬಂದ ಮಹಿಳೆಯರು, ಹುದುಗಿಯರು ಇವರ ಪಾತ್ರವನ್ನ ಯೋಚಿಸ್ತಾ ಇದ್ದೆ. ಅನಿಸಿದ್ದು ಏನೆಂದರೆ ಇಲ್ಲಿಯವರೆಗಿನ "achievements" ಎಲ್ಲದಕ್ಕೂ ಕಾರಣ ಅಥವಾ ಗುರಿ ಕೊಟ್ಟದ್ದು ಅವರೇ ಅಂತ. ನನ್ನ ಆಯಿಯ ಸ್ಥೈರ್ಯ, ನನ್ನ ತಂಗಿಯ ಸಹನಶೀಲತೆ, ನನಗೆ ಕಳಿಸಿದ ಅಧ್ಯಾಪಕಿಯರ ಪ್ರೋತ್ಸಾಹನೆ, ಮೊದಲು ಕೆಲಸಕ್ಕೆ ಸೇರಿದಾಗಿನ ಬಾಸ್ ನ ಭರವಸೆ, ಉಳಿದವದರ ನಿಸ್ವಾರ್ಥ ಪ್ರೀತಿ ಎಲ್ಲಾನೂ ನನ್ನ ಈ ವರೆಗಿನ ಜೀವನವನ್ನ ತುಂಬಿವೆ. ಇವರೆಲ್ಲರಿಗೂ ನನ್ನ ಮನಹ್ಪೂರ್ವಕ ಅಭಾರಗಳನ್ನ ತಿಳಿಸಬೇಕು.
No comments:
Post a Comment